ಮಂತ್ರಾಲಯ ಸಮೀಪ ಭೀಕರ ಅಪಘಾತ: 8 ಜನ ಭಕ್ತರ ಸಾವು..!

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಮಂತ್ರಾಲಯ ಸಮೀಪ ಭೀಕರ ಅಪಘಾತ: 8 ಜನ ಭಕ್ತರ ಸಾವು..!

ಬೆಂಗಳೂರು: ಮಂತ್ರಾಲಯ ಸಮೀಪದ ಚಿಲಕಣಡೋಣ ಬಳಿ ಗುರುವಾರ (April-16) ಬೆಳಗಿನ ಜಾವ ಭೀಕರವಾಗಿ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಎಂಟು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು 21 ಜನ ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆಂದು ತೆರಳುತ್ತಿರುವ ಮಧ್ಯದಲ್ಲಿ ಅವಘಡ ಸಂಭವಿಸಿದೆ. ಮೃತಪಟ್ಟವರಲ್ಲಿ ಚಿಕ್ಕಮಗಳೂರು ಸಮೀಪದ ಕಣನಾಯಕನಹಳ್ಳಿಯ ಕುಮಾರ (50), ದೀಪಿಕಾ (40), ಬೆಳ್ಳಿ (5), ಬೇಲೂರು ತಾಲೂಕಿನ ಚಟ್ಟನಹಳ್ಳಿ ಗ್ರಾಮದ ಸುನೀಲ್ (40), ಯಶೋದಾ( 60), ಲೋಲಾಕ್ಷಿ, ಉದ್ದೇವ ಗ್ರಾಮದ ಪುಟ್ಟಮ್ಮ (55), ಮೀನಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾರುಬೂದಿ ಟ್ಯಾಂಕರ್ ಮತ್ತು ಪಿಕ್ ಅಪ್ ವಾಹನದ ನಡುವೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಅಪಘಾತ ಘಟಿಸಿದ್ದು, ಐವರು ಮಹಿಳೆಯರು, ಚಾಲಕ ಸೇರಿ ಇಬ್ಬರು ಪುರುಷರು, ಒಂದು ಮಗು ಮೃತಪಟ್ಟಿದೆ. ಇನ್ನೂ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ.