ಕಲಬುರಗಿ ಕಾರಾಗೃಹದಿಂದ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿ ಬಂಧನ - ಹುಮನಾಬಾದ ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಕಲಬುರಗಿ ಕಾರಾಗೃಹದಿಂದ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿ ಬಂಧನ  - ಹುಮನಾಬಾದ ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆ

ಹುಮನಾಬಾದ ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆ

​ಬೀದರ: ಕಲಬುರ್ಗಿ ಕೇಂದ್ರ ಕಾರಾಗೃಹದಿಂದ ಇತ್ತೀಚೆಗೆ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಕೊನೆಯ ಕೈದಿಯನ್ನೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇದರೊಂದಿಗೆ ಪರಾರಿಯಾಗಿದ್ದ‌ ಆರೋಪಿಗಳನ್ನು ಈಗಾಗಲೇ‌ ಮರು ಬಂಧಿಸಿದಂತಾಗಿದೆ. ​ಪೊಕ್ಸೋ (POCSO) ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ್ ಗ್ರಾಮದ ನಿವಾಸಿ ಮಸ್ತಾನ್ ಕಮಲಾಪುರೆ ಬಂಧಿತ ಕೈದಿ. 

ಈತನನ್ನು ಬುಧವಾರ ಮಧ್ಯರಾತ್ರಿ ಬಸವಕಲ್ಯಾಣ ತಾಲೂಕಿನ ರಾಜೇಶ್ವರ್ ಗ್ರಾಮದಲ್ಲಿ ಬೀದರ್ ಪೊಲೀಸರು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.‌ ಎಸ್ಪಿ ಪ್ರದೀಪ ಗುಂಟಿ ಅವರ ಮಾರ್ಗದರ್ಶನದಲ್ಲಿ  ಡಿವೈಎಸ್ಪಿ ಮಡೊಳಪ್ಪ ಅವರ ನೇತೃತ್ವದಲ್ಲಿ, ಸಿಪಿಐಗಳಾದ ಸಂತೋಷ ತಟ್ಟೆಪಳ್ಳಿ, ಅಮೂಲ ಕಾಳೆ, ಪಿಎಸ್ಐಗಳಾದ ನಾಗೇಂದ್ರ, ವಿಜಯಕುಮಾರ ಹಾಗೂ ಇತರೆ ಸಿಬ್ಬಂದಿಗಳ ತಂಡ  ಯಶಸ್ಸು ಕಾರ್ಯಾಚರಣೆ ನಡೆಸಿದ್ದಾರೆ.

​ಜುಲೈ 4ರಂದು ಕಲಬುರಗಿ ಕಾರಾಗೃಹದ ಭದ್ರತೆಯನ್ನು ಉಲ್ಲಂಘಿಸಿ ಮೂವರು ಕೈದಿಗಳು ಪರಾರಿಯಾಗಿದ್ದರು. ಈ ಘಟನೆ ಸಂಬಂಧ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಕೆಲ ದಿನಗಳ ಹಿಂದೆಯಷ್ಟೇ ಇಬ್ಬರು ಕೈದಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ ಮಸ್ತಾನ್‌ನನ್ನು ಬಂಧಿಸುವ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಮತ್ತೆ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಪರಾರಿಯಾದ ದಿನದಿಂದ  ಹುಮನಾಬಾದ ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ತಂಡ ನಿರಂತರ ಕಾರ್ಯಚಣೆ ನಡೆಸಿದ್ದರು, ಇಬ್ಬರು ಆರೋಪಿಗಳ ಬಂಧನ ಕೂಡ ಇದೇ ಅಧಿಕಾರಿಗಳ ತಂಡ ನಡೆಸಿರುವುದು ವಿಶೇಷವಾಗಿದೆ.