ಬೆಂಗಳೂರು: ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದಾರೆ ಎಂದು ವರದಿಯಾಗಿದೆ. ನಾಲ್ವರು ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದೆ.
7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಗ್ಗೆ 9ರಿಂದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಸಂಜೆ 4ಕ್ಕೆ ಅಂತ್ಯಗೊಂಡಿತ್ತು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆದಿದೆ.
ಒಂದು ಸ್ಥಾನಕ್ಕಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಯ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬಿಜೆಪಿ ಮತ್ತು ಜೆಡಿಎಸ್ ನ ಕೆಲವು ಶಾಸಕರು ಅಡ್ಡಮತದಾನ ಮಾಡಿ ಶಾಕ್ ನೀಡಿದ್ದು, ಕಾಂಗ್ರೆಸ್ ಗೆ ಲಾಭವಾಗಿದೆ.
ಜೆಡಿಎಸ್ ನ ಏಳು ಶಾಸಕರು ಮತ್ತು ಬಿಜೆಪಿಯ ನಾಲ್ವರು ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎಂದು ವರದಿಯಾಗಿದೆ. 5ನೇ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನಯ್ ಕಾರ್ತಿಕ್ ಅವರಿಗೆ 32 ಮತಗಳು ಬಿದ್ದಿವೆ. ಆದರೆ ಮೈತ್ರಿ ಅಭ್ಯರ್ಥಿ ಗೋವಿಂದರಾಜುಗೆ ಕೇವಲ 14 ಮತಗಳು ಸಿಕ್ಕಿವೆ.
ಒಟ್ಟು ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಐದು ಮತ್ತು ಎರಡು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಸೋಲು ಕಂಡಿದ್ದಾರೆ.
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ. ನಂಬರ್ ಸರಿಯಾಗಿ ಬರೆಯದಿದ್ದಕ್ಕೆ 1 ಮತವನ್ನು ಅಸಿಂಧುಗೊಳಿಸಲಾಗಿದೆ.
ಗೆದ್ದವರು ಯಾರೆಲ್ಲಾ?
ಬಿಕೆ ಹರಿಪ್ರಸಾದ್ - ಕಾಂಗ್ರೆಸ್- 30 ಮತಗಳು
ತಿಪ್ಪಣ್ಣಪ್ಪ ಕಾಮಕನೂರ್ -ಕಾಂಗ್ರೆಸ್- 30 ಮತಗಳು
ಪಿ ವಿ ಮೋಹನ್ -ಕಾಂಗ್ರೆಸ್- 29 ಮತಗಳು
ವಿನಯ್ ಕಾರ್ತಿಕ್ -ಕಾಂಗ್ರೆಸ್- 32 ಮತಗಳು
ಶಿವಣ್ಣ ಮಳವಳ್ಳಿ - ಕಾಂಗ್ರೆಸ್- 30 ಮತಗಳು
ರಘು ಕೌಟಿಲ್ಯ -ಬಿಜೆಪಿ 29 ಮತಗಳು
ಲಿಂಗರಾಜ್ ಪಾಟೀಲ್ - ಬಿಜೆಪಿ- 27-ಮತಗಳು