ಬೀದರ: ಬೀದರ್ ಜಿಲ್ಲಾ ಮಠಾಧೀಶರ ಒಕ್ಕೂಟದ ನೂತನ ಅಧ್ಯಕ್ಷರಾಗಿ ತಡೋಳ ಹಾಗೂ ಮೇಹ್ಕರ್ ಹಿರೇಮಠದ ರಾಜೇಶ್ವರ ಶಿವಾಚಾರ್ಯರು ಆಯ್ಕೆಗೊಂಡಿದ್ದಾರೆ.
ತಡೋಳ ಗ್ರಾಮದ ಗುರುಕುಲ ಆಶ್ರಮದಲ್ಲಿ ನಡೆದ ಸಭೆಯಲ್ಲಿ ಸರ್ವ ಮಠಾಧೀಶರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂನತ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಬೀದರ್ ಜಿಲ್ಲಾ ಮಠಾಧೀಶರ ಒಕ್ಕೂಟದ ನೂತನ ಉಪಾಧ್ಯಕ್ಷರಾಗಿ ರಾಜೇಶ್ವರ ಹಿರೇಮಠದ ಘನಲಿಂಗ ರುದ್ರಮುನಿ ಶಿವಾಚಾರ್ಯರು,ಹಲಬರ್ಗಾದ ಹಾವಗಿಲಿಂಗ ಶಿವಾಚಾರ್ಯರು, ಕಾರ್ಯದರ್ಶಿಯಾಗಿ ಹುಡಗಿ ವಿರಕ್ತಮಠದ ಚನ್ನಮಲ್ಲ ಸ್ವಾಮೀಜಿ, ಸಹ ಕಾರ್ಯದರ್ಶಿಯಾಗಿ ಚಾಂಭೋಳ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಆಯ್ಕೆಗೊಂಡಿದ್ದಾರೆ.
