ಬೀದರ: ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬೀದರ್ ಲೋಕಾಯುಕ್ತ ಪೊಲೀಸರಿಂದ ಆರು ಜನರ ಬಂಧನ ನಡೆದಿದೆ.
ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬೀದರ್ (Bidar) ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ರೂ. ಬಹುಕೋಟಿ ಹಗರಣ ಇದೀಗ ಸಾಬೀತಾಗಿದ್ದು, ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿ ಆರು ಜನರನ್ನು ಬಂಧಿಸಿದ್ದಾರೆ.
ಕಳೆದ 2017-18ರಲ್ಲಿ 45 ಕೋಟಿಗೂ ಅಧಿಕ ಹಣ ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ ಆರೋಪ ಇತ್ತು. ಅಂದಿನ ವಿಸಿ ಎಚ್ ಡಿ ನಾರಾಯಣ ಸ್ವಾಮಿ, ಕಳೆದ 2017-2018ರ ಅವಧಿಯಲ್ಲಿ ಪಶು ವಿಶ್ವ ವಿದ್ಯಾನಿಲಯದ ಕಂಟ್ರೋಲರ್ ಆಗಿದ್ದ ಕೆ.ಎಲ್.ಸುರೇಶ್ (ನಿವೃತ್ತಿ), ಮೃಂತ್ಯುಂಜಯ ಹಿರೇಮಠ ಎಫ್ ಡಿ ಎ, ಬೆಂಗಳೂರು ಎಂಟರ್ಪ್ರೈಸ್ ಮಾಲೀಕರಾ ಬೊಪಣ್ಣ, ಮಂಜುನಾಥ ಹಾಗು ಹಣಖಾತೆಗೆ ಹಾಕಿಸಿಕೊಂಡು ತೆಗೆದುಕೊಟ್ಟ ರಾಮಗೊಂಡ ಸೇರಿ ಒಟ್ಟು ಆರು ಜನರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ*.

