ಫೆ.21 ರಿಂದ ಹೂಗಾರ ಸಮಾಜ ಸಂಘಟನೆಗೆ ಅಶೋಕ ಹೂಗಾರ ಸಂಚಾರ.

Lead AnalystSite Administrator
Release DateFebruary 20, 2026
Intel Density5 min read
Signal Output:
ಫೆ.21 ರಿಂದ ಹೂಗಾರ ಸಮಾಜ ಸಂಘಟನೆಗೆ ಅಶೋಕ ಹೂಗಾರ ಸಂಚಾರ.

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ ಸಭಾದ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ ಫೆ.21ರಿಂದ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂದು ಹೂಗಾರ ಸಮಾಜದ ಜಿಲ್ಲಾಧ್ಯಕ್ಷರಾದ ರಾಜಕುಮಾರ ಹೂಗಾರ ಮದಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ರೈಯಚೂರ, ಯಾದಗಿರಿ, ಕೋಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲೆಗಳಲ್ಲಿ ಒಂದು ತಿಂಗಳ ಕಾಲ ಪ್ರವಾಸ ನಡೆಸಲ್ಲಿದ್ದು, ಬೀದರ ಜಿಲ್ಲೆಯಿಂದ ಸಂಘಟನಾ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿನ ಹೂಗಾರ ಸಮಾಜದವರು ಸಂಘಟನಾ ಕಾರ್ಯಗಳ ಭೇಟಿಗೆ ಸೂಕ್ತ ಸ್ಪಂದನೆ ನೀಡಬೇಕು. ಒಂದು ವಾರಕಾಲ ಬೀದರ ಜಿಲ್ಲೆಯ ವಿವಿಧಡೆ ಸಂಚಾರ ನಡೆಸಿ ಹೂಗಾರ ಸಮಾಜದಲ್ಲಿನ ಸಮಸ್ಯೆಗಳು ಕೇಳಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.