ಬಸವಕಲ್ಯಾಣ : ವ್ಯಕ್ತಿಯ ಕಾಲುಗಳ ಮೇಲೆ ಹರಿದ ತೇರು
ಬಸವಕಲ್ಯಾಣ: ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೀತ್ಸವ ನಿಮಿತ್ಯ ಗುರುವಾರ ಮುಂಜಾನೆ ನಡೆದ ರಥೋತ್ಸವದಲ್ಲಿ ಅವಘಡ ಸಂಭವಿಸಿದ್ದು, ರಥದ ಚಕ್ರಕ್ಕೆ ಸಿಲುಕಿ ಇಬ್ಬರ ಕಾಲುಗಳಿಗೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರುವಂತೆ ಆಗಿದೆ.
ರಥೋತ್ಸವದ ಅವಘಡದಲ್ಲಿ ಧನರಾಜ ಚಾಕೂರೆ ಹಾಗೂ ರಿಷಬ್ ಅವರ ಕಾಲುಗಳಿಗೆ ಗಂಭೀರ ಗಾಯಗೊಂಡ ಕುರಿತು ಮಾಹಿತಿ ಲಭ್ಯವಾಗಿದೆ. ನೂಕುನುಗಲ ಮಧ್ಯೆ ರಥ ಎಳೆಯುವ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ. ಧನರಾಜ್ ಎಂಬುವವರ ಎರಡು ಕಾಲಿಗೆ ಗಂಭೀರ ಗಾಯಗಳಾಗಿದೆ. ಇನ್ನೋರ್ವ ವ್ಯಕ್ತಿಗೂ ಗಾಯಗಳಾಗಿದೆ.

