ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ : ರಾಜಶೇಖರ ಪಾಟೀಲ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ : ರಾಜಶೇಖರ ಪಾಟೀಲ

ಹುಮನಾಬಾದ: ಜೀವನದಲ್ಲಿ ಅನೇಕ ಸಂಕಷ್ಟಗಳು ಎದುರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೂಡ ಕಲಿಸಬೇಕು. ಸಂಸ್ಕಾರ ಕಲಿಸದ ಪಾಲಕರು ವೃದ್ಧಾಶ್ರಮ ಸೇರಬೇಕಾಗುತ್ತದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಮಾರ್ಮಿಕವಾಗಿ ಹೇಳಿದರು.

ಪಟ್ಟಣದ ಕನ್ನಿಕಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ನಗರೇಶ್ವರ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮನುಷ್ಯನ ಜೀವನಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರ ಕೂಡ ಮುಖ್ಯವಾಗಿದೆ. ಅನೇಕ ಕಡೆಗಳಲ್ಲಿ ನೋಡುತ್ತಿದ್ದೇವೆ ಉನ್ನತ ಮಟ್ಟದ ಶಿಕ್ಷಣ ಪಡೆದು ಮಕ್ಕಳು ದೇಶ, ವಿದೇಶಗಳಲ್ಲಿ ದೊಡ್ಡ ಕೆಲಸ ನಿರ್ವಹಿಸುತ್ತಿರುವ ಅನೇಕರ ಪಾಲಕರು ಇಂದು ವೃದ್ಧಾಶ್ರಮದಲ್ಲಿ ಉಳಿಯುವಂತ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಸಂಸ್ಕಾರದ ಕೊರತೆಯೇ ಕಾರಣವಾಗಿದೆ. ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಳಿಸುವುದು ಅತಿ ಮುಖ್ಯವಾಗಿದೆ ಎಂದ ಅವರು, ದೀರ್ಘಾವಧಿಕಾಲ ವರೆಗೂ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಕೆಲಸವಲ್ಲ. ಅನೇಕ ಅಡ್ಡಿ ಆತಂಕಗಳು ಆರ್ಥಿಕ ಪರಿಸ್ಥಿತಿ ಸಮಸ್ಯೆ ಎದುರಾಗುತ್ತವೆ. ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳ ಮಧ್ಯೆ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಕಷ್ಟಕರವಾಗಿದೆ. ಈ ಹಿಂದೆ ಕೂಡ ಈ ಶಿಕ್ಷಣ ಸಂಸ್ಥೆಗೆ ಸಹಾಯ ಸಹಕಾರ ನೀಡಿದ್ದೇನೆ. ಮುಂದೆಯೂ ಕೂಡ ಇಬ್ಬರು ಎಂಎಲ್‌ಸಿಗಳ ಮೂಲಕ ಆಡಳಿತ ಮಂಡಳಿಯವರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ನಾಗರಾಜ ರಘೋಜಿ ಮಾತನಾಡಿ,

ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರ್ ಗಳಾಗಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು. ಸಂಸ್ಥೆಯ ಸದಸ್ಯರಾದ ನಾರಾಯಣರಾವ ಚಿದ್ರಿ, ಲಕ್ಷ್ಮಣರಾವ ಹಣಕುಣಿ ಮಾತನಾಡಿದರು.

ಎಂಎಲ್ಸಿ‌ ಡಾ. ಚಂದ್ರಶೇಖರ ಪಾಟೀಲ, ಎಂಎಲ್ಸಿ ಭೀಮರಾವ ಪಾಟೀಲ, ಸಂಸ್ಥೆಯ ಪದಾಧಿಕಾರಿಗಳಾದ ದತ್ತಕುಮಾರ ಚಿದ್ರಿ, ಬಾಲಚಂದ್ರ ಜಾಜಿ, ಜಯಪಾಲ ಗುಪ್ತಾ, ದೇವದತ್ತ ಉಪ್ಪಲಿ, ವೆಂಕಟ ಕೊಟರಗಿ, ಸಂಧ್ಯಾರಾಣಿ ರಘೋಜಿ, ಸಂಗಪ್ಪಾ ರಘೋಜಿ, ಶ್ರೀನಿವಾಸ ರಘೋಜಿ, ಪ್ರೇಮಕುಮಾರ ಜಾಜಿ, ನಿರ್ಮಲಾ ರಾಯಚೂರಕರ್, ಸುಧೀಂದ್ರ ಗಾದಾ, ಪಾಮಯ್ಯಾ ಗಾದಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು, ಪಾಲಕರು ಇದ್ದರು.