ಆರೋಗ್ಯವನ್ನು ಕಾಪಾಡಬೇಕು" ಎಂದು ಪ್ರತಿಭಟನಾಕಾರರು ಉಗ್ರವಾಗಿ ಆಗ್ರಹಿಸಿದರು.
ಚರ್ಮರೋಗದಿಂದಾಗಿ ಹೆಣ್ಣು ಕೊಡುತ್ತಿಲ್ಲ: ಬಾಬುರಾವ ಆಕ್ರೋಶ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಬಾಬುರಾವ ತುಂಬಾ, "ಕಳೆದ ಒಂದು ದಶಕದಿಂದ ಈ ಕಾರ್ಖಾನೆಗಳ ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವನ ಸಂಪೂರ್ಣ ಹಾಳಾಗಿದೆ. ಇದು ಗಡವಂತಿ ಗ್ರಾಮಸ್ಥರಿಗೆ ಶಾಪವಾಗಿ ಪರಿಣಮಿಸಿದೆ. ಮಾಲಿನ್ಯದ ದುಷ್ಪರಿಣಾಮದಿಂದ ಗ್ರಾಮಸ್ಥರು ತೀವ್ರ ಚರ್ಮರೋಗದಿಂದ ಬಳಲುತ್ತಿದ್ದು, ನಮ್ಮೂರಿನ ಯುವಕರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇತ್ತ ಹೊಲಗಳಲ್ಲಿ ಕೃಷಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ" ಎಂದು ಅಳಲು ತೋಡಿಕೊಂಡರು.
"ಈ ಕಾರ್ಖಾನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವಷ್ಟು ಆಕ್ರೋಶ ನನ್ನಲ್ಲಿದೆ. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಒಂದು ವೇಳೆ ರಾಜಕೀಯ ಮಾಡಲು ಯತ್ನಿಸಿದರೆ ಮುಂಬರುವ ದಿನಗಳಲ್ಲಿ ನಮ್ಮ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ." — ಬಾಬುರಾವ ತುಂಬಾ, ಸ್ಥಳೀಯ ಮುಖಂಡ
ಗುರುಗಂಗಾ ನದಿ ಸಂಪೂರ್ಣ ಕಲುಷಿತ: ಆನಂದರಾಜ
ಮಾಣಿಕನಗರ ಸಂಸ್ಥಾನದ ಆನಂದರಾಜ ಅವರು ಮಾತನಾಡಿ, "ಮಾಣಿಕಪ್ರಭು ಸಂಸ್ಥಾನವು ಕೇವಲ ಧಾರ್ಮಿಕ ಆಚರಣೆಗಳನ್ನು ಮಾಡಿಕೊಂಡು ಬರುವ ಪವಿತ್ರ ಸಂಸ್ಥೆಯಾಗಿದೆ. ಆದರೆ ಇಂದು ಕಾರ್ಖಾನೆಗಳ ಹಾವಳಿಯಿಂದಾಗಿ ನಾವೂ ಕೂಡ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವಂತಹ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಪ್ರದೇಶದ ಗುರುಗಂಗಾ ನದಿ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಸುತ್ತಮುತ್ತ ಗಬ್ಬು ವಾಸನೆ ಹರಡುತ್ತಿದೆ. ಸರ್ಕಾರ ತಕ್ಷಣವೇ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ, ಮಾಲಿನ್ಯಕಾರಕ ಕಾರ್ಖಾನೆಗಳನ್ನು ಮುಚ್ಚಿಸಬೇಕು" ಎಂದು ಒತ್ತಾಯಿಸಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ಪ್ರಮುಖರಾದ ಗುಂಡುರೆಡ್ಡಿ ಕಮಲಾಪೂರ್, ಗಜೇಂದ್ರ ಕನಕಟ್ಟಕರ್, ಸುರೇಶ ಸೀಗಿ, ವಿನಾಯಕ ಮಂಡಾ, ಚೇತನರಾಜ ಪ್ರಭು ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು ಮಾತನಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಹುಮನಾಬಾದ: ತಾಲೂಕಿನ ವಿವಿಧ ಕೈಗಾರಿಕಾ ಘಟಕಗಳಿಂದ ಉಂಟಾಗುತ್ತಿರುವ ತೀವ್ರ ಪರಿಸರ ಹಾನಿ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಖಂಡಿಸಿ ಮಂಗಳವಾರ ನೂರಾರು ಗ್ರಾಮಸ್ಥರು ಬೀದರ - ಕಲಬುರ್ಗಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಮಾಣಿಕನಗರ, ಗಡವಂತಿ, ಮೋಳಕೇರಾ, ಬಸವಂತಪುರ ಹಾಗೂ ಹುಮನಾಬಾದ್ ಸುತ್ತಮುತ್ತಲಿನ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. "ಪರಿಸರ ಮಾಲಿನ್ಯ ಉಂಟುಮಾಡುತ್ತಿರುವ ಕಾರ್ಖಾನೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು, ಪರಿಸರವನ್ನು ಉಳಿಸಬೇಕು ಹಾಗೂ ಈ ಭಾಗದ ಜನರ ಆರೋಗ್ಯವನ್ನು ಕಾಪಾಡಬೇಕು" ಎಂದು ಪ್ರತಿಭಟನಾಕಾರರು ಉಗ್ರವಾಗಿ ಆಗ್ರಹಿಸಿದರು.
ಚರ್ಮರೋಗದಿಂದಾಗಿ ಹೆಣ್ಣು ಕೊಡುತ್ತಿಲ್ಲ: ಬಾಬುರಾವ ಆಕ್ರೋಶ
ಮಾತನಾಡಿದ ಮುಖಂಡ ಬಾಬುರಾವ ತುಂಬಾ, "ಕಳೆದ ಒಂದು ದಶಕದಿಂದ ಈ ಕಾರ್ಖಾನೆಗಳ ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವನ ಸಂಪೂರ್ಣ ಹಾಳಾಗಿದೆ. ಇದು ಗಡವಂತಿ ಗ್ರಾಮಸ್ಥರಿಗೆ ಶಾಪವಾಗಿ ಪರಿಣಮಿಸಿದೆ. ಮಾಲಿನ್ಯದ ದುಷ್ಪರಿಣಾಮದಿಂದ ಗ್ರಾಮಸ್ಥರು ತೀವ್ರ ಚರ್ಮರೋಗದಿಂದ ಬಳಲುತ್ತಿದ್ದು, ನಮ್ಮೂರಿನ ಯುವಕರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇತ್ತ ಹೊಲಗಳಲ್ಲಿ ಕೃಷಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ" ಎಂದು ಅಳಲು ತೋಡಿಕೊಂಡರು.