ಹುಮನಾಬಾದ: ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಸಂಜುಕುಮಾರ ಜುನ್ನಾ, ಕಾರ್ಯದರ್ಶಿಯಾಗಿ ಗುಂಡು ಅತಿವಾಳ ಆಯ್ಕೆ.

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಹುಮನಾಬಾದ:  ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಸಂಜುಕುಮಾರ ಜುನ್ನಾ, ಕಾರ್ಯದರ್ಶಿಯಾಗಿ ಗುಂಡು ಅತಿವಾಳ ಆಯ್ಕೆ.

ಹುಮನಾಬಾದ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ   ಹುಮನಾಬಾದ ತಾಲೂಕು ನೂತನ ಅಧ್ಯಕ್ಷರಾಗಿ ಸಂಜುಕುಮಾರ ಜುನ್ನಾ ಪ್ರಧಾನ ಕಾರ್ಯದರ್ಶಿಯಾಗಿ ಗುಂಡು ಅತಿವಾಳ ಆಯ್ಕೆ ಆದರು.

 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಉಪಾಧ್ಯಕ್ಷ ಪೃತ್ವರಾಜ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು.  ನಂತರ ನೂತನ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ ಆಯ್ಕೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಜಿಲ್ಲೆಯ ವಿವಿಧಡೆ ಸರಳವಾಗಿ ಪದಾಧಿಕಾರಿ ಆಯ್ಕೆ ನಡೆಯಿತ್ತು. ಆದರೆ, ಇಲ್ಲಿ ಮಾತ್ರ ಚೀಟಿಮೂಲಕ ಆಯ್ಕೆ ಮಾಡುವಂತೆ ಆಗಿದೆ. ನೂತನ ಪದಾಧಿಕಾರಿಗಳು ಎಲ್ಲಾ ಸದಸ್ಯರನ್ನು ಸಮನಾಗಿ ತೆಗೆದುಕೊಂಡು ಹೋಗಬೇಕು. ಪತ್ರಕರ್ತರ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಹೊಗಬೇಕು. ಸಂಘದ ಎಲ್ಲಾ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿಕೊಂಡು ಅಂತಿಮ ಪಟ್ಟಿಯನ್ನು ಜಿಲ್ಲಾ ಘಟಕಕ್ಕೆ ಸಲ್ಲಿಸಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ ಚಟ್ಟಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ದುರ್ಯೋಧನ ಹೂಗಾರ, ಕಾರ್ತಿಕ ಸ್ವಾಮಿ ಸೇರಿದಂತೆ ಹುಮನಾಬಾದ ತಾಲೂಕಿನ ಸಂಘದ ಸದಸ್ಯರು ಭಾಗವಹಿಸಿದರು.