ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಜಗನ್ನಾಥ ಹಾಲಮಡಗಿ ನೇಮಕ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಜಗನ್ನಾಥ ಹಾಲಮಡಗಿ ನೇಮಕ

ಬೆಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮೂವರು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. 

ಕಳೆದ ಕೆಲವು ತಿಂಗಳಿನಿಂದ ತೆರವಾಗಿದ್ದು ಸ್ಥಾನಕ್ಕೆ ಇದೀಗ ರಾಯಚೂರು ಜಿಲ್ಲೆ ಸಿಂಧನೂರಿನ ಸತ್ಯ ಗಾರ್ಡನ್ ನಿವಾಸಿ ಸತ್ಯನಾರಾಯಣ ಶೆಟ್ಟಿ, ಬೀದರ್‌ನ ಹುಮಾನಬಾದ್ ನಿವಾಸಿ ಜಗನ್ನಾಥ ಹಾಲಮಡಗಿ ಹಾಗೂ ಮಂಡ್ಯ ಜಿಲ್ಲೆಯ ಹೊಸಹಳ್ಳಿ ಕೆ.ಎಚ್.ಬಿ ಕಾಲೋನಿ ವಾಸಿ ವೆಂಕಟೇಶ್ ಅವರನ್ನು ನೇಮಿಸಿದೆ.

ಕರ್ನಾಟಕ ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧಿನಿಯಮ-2005 ರ ಪ್ರಕರಣ (18)ರ ಅನ್ವಯ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕರ್ನಾಟಕ ನಿಯಮ 2010 ರ ನಿಯಮ (3) ಮತ್ತು (ತಿದ್ದುಪಡಿ) ಕರ್ನಾಟಕ ನಿಯಮ, 2025ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೂವರು ಸದಸ್ಯರನ್ನು ಮುಂದಿನ 3 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಗಂಗಾದೇವಿ ಎಚ್.ಸಿ. ಆದೇಶದಲ್ಲಿ ತಿಳಿಸಿದ್ದಾರೆ.