ಔರಾದ- ದಲಿತ ಬಾಲಕಿ ಶಂಕಾಸ್ಪದ ಸಾವು: ಸಿಐಡಿ ತನಿಖೆಗೆ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಔರಾದ- ದಲಿತ ಬಾಲಕಿ ಶಂಕಾಸ್ಪದ ಸಾವು: ಸಿಐಡಿ ತನಿಖೆಗೆ

ಬೀದ‌ರ: ಇತ್ತೀಚೆಗೆ  ಔರಾದ್ ತಾಲೂಕಿನಲ್ಲಿ ಮೇ 8ರಂದು ನಡೆದ ದಲಿತ ಬಾಲಕಿ ಸಾವಿನ ತನಿಖೆಯನ್ನು ಇದೀಗ ರಾಜ್ಯ ಸರ್ಕಾರ ಸಿಐಡಿಗೆ ತನಿಖೆ ನಡೆಸಲು ಆದೇಶಿಸಿದೆ.

ಘಟನೆ ಸಂಬಂಧ ಔರಾದ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 351, 352, 108, 137(2), 103(1), 64, 127(2) 8 4, 8, 12 ಪೋಟ್ರೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಬೀದರ್ ಜಿಲ್ಲಾ ಪೊಲೀಸರು ಸಿಐಡಿಗೆ ವಹಿಸಬೇಕು ಎಂದು ಡಿಜಿಪಿ ಡಾ.ಎಂ.ಎ.ಸಲೀಂ ಅವರು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದಾರೆ.

ಸಾಮಾಜಿಕ ಹೋರಾಟಗಾರಾದ ಅಂಕುಶ ಗೊಖಲೆ, ಅಹಿಂಸಾ ಚೇತನ್ ಸೇರಿದಂತೆ ಹಲವು ಪ್ರಗತಿಪರ, ದಲಿತ ಸಂಘಟನೆಗಳ ಮುಖಂಡರು ಮೃತ ಬಾಲಕಿಯ ಮನೆಗೆ ಭೇಟಿ ಕೊಟ್ಟು, ಬೀದರ‌ಜಿಲ್ಲೆಯ ವಿವಿಧಡೆ ಹೋರಾಟ ನಡಸಿ ಪ್ರಕರಣವನ್ನು ಸಿಐಡಿ ಅಥವಾ ವಿಶೇಷ ತನಿಖಾ ದಳದಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಕಳೆದ ಎರೆಡು ದಿನಗಳ ಹಿಂದೆ ಬೆಂಗಳೂರುನಲ್ಲಿ ಕೂಡ ದಲಿತಪರ ಹೋರಾಟಗಾರರು ಪ್ರತಿಭಟನೆ ನಡೆಸಿ ಸೂಕ್ತ ತನಿಖೆಗೆ ಆಗ್ರಹಿಸಿರುವುದು ಸ್ಮರಿಸಬಹುದು.