ಪಶು ವಿವಿ ಬಹುಕೋಟಿ ಹಗರಣ – ಮಾಜಿ ಉಪಕುಲಪತಿ ಸೇರಿ ಆರು ಜನರ ಬಂಧನ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಪಶು ವಿವಿ ಬಹುಕೋಟಿ ಹಗರಣ – ಮಾಜಿ ಉಪಕುಲಪತಿ ಸೇರಿ ಆರು ಜನರ ಬಂಧನ

ಬೀದರ: ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬೀದರ್ ಲೋಕಾಯುಕ್ತ ಪೊಲೀಸರಿಂದ  ಆರು ಜನರ ಬಂಧನ ನಡೆದಿದೆ.

ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬೀದರ್ (Bidar) ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ರೂ. ಬಹುಕೋಟಿ ಹಗರಣ ಇದೀಗ ಸಾಬೀತಾಗಿದ್ದು, ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿ ಆರು ಜನರನ್ನು ಬಂಧಿಸಿದ್ದಾರೆ.

ಕಳೆದ 2017-18ರಲ್ಲಿ 45 ಕೋಟಿಗೂ ಅಧಿಕ ಹಣ ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ ಆರೋಪ ಇತ್ತು. ಅಂದಿನ ವಿಸಿ ಎಚ್ ಡಿ ನಾರಾಯಣ ಸ್ವಾಮಿ, ಕಳೆದ 2017-2018ರ ಅವಧಿಯಲ್ಲಿ ಪಶು ವಿಶ್ವ ವಿದ್ಯಾನಿಲಯದ ಕಂಟ್ರೋಲರ್ ಆಗಿದ್ದ ಕೆ.ಎಲ್.ಸುರೇಶ್ (ನಿವೃತ್ತಿ), ಮೃಂತ್ಯುಂಜಯ ಹಿರೇಮಠ ಎಫ್ ಡಿ ಎ, ಬೆಂಗಳೂರು ಎಂಟರ್ಪ್ರೈಸ್ ಮಾಲೀಕರಾ  ಬೊಪಣ್ಣ, ಮಂಜುನಾಥ ಹಾಗು ಹಣಖಾತೆಗೆ ಹಾಕಿಸಿಕೊಂಡು ತೆಗೆದುಕೊಟ್ಟ ರಾಮಗೊಂಡ ಸೇರಿ ಒಟ್ಟು ಆರು ಜನರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ*.

ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್,ಐಜಿಪಿ ಡಾ.ಎ.ಎಸ್.ಸುಬ್ರಮಣ್ಣೇಶ್ವರ,ಎಸ್ಪಿ ಸಿ ಮತ್ತು ಟಿ ಬದ್ರಿನಾಥ, ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ,ಪಿಐಬಾಬಾ ಸಾಹೇಬ್ ಪಾಟೀಲ್,ಪಿಐ ಅರ್ಜುನಪ್ಪಾ,

ಸಂತೋಷ ರಾಠೋಡ್ ಸೇರಿದಂತೆ ಹಲವು ಸಿಬ್ಬಂದಿಗಳು‌ ಬಂಧನ ಕಾರ್ಯಾಚರಣೆಯಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.