ಬಶೀರಾಪೂರ ನೀರಿನ ಸಮಸ್ಯೆ: ಪಂಚಾಯತ ಎದುರು ಪ್ರತಿಭಟನೆ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಬಶೀರಾಪೂರ ನೀರಿನ ಸಮಸ್ಯೆ: ಪಂಚಾಯತ ಎದುರು ಪ್ರತಿಭಟನೆ

ಚಿಟಗುಪ್ಪ :ಬಶೀರಾಪೂರ ಗ್ರಾಮದಲ್ಲಿನ ಕುಡಿಯುವ ನೀರು ಸಮಸ್ಯೆಗೆ ಪಂಚಾಯತ ಅಧಿಕಾರಿಗಳು ಸ್ಪಂದಿಸದ ಕಾರಣ ಮೀನಕೇರಾ ಗ್ರಾಮ ಪಂಚಾಯತ ಎದುರಿಗೆ ಪ್ರತಿಭಟನೆ ನಡೆಸಿದರು.

ಕಳೆದ ಅನೇಕ ದಿನಗಳಿಂದ ನೀರಿನ ಸಮಸ್ಯೆ ಕುರಿತು ಪಂಚಾಯತ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ, ಯಾರು ಕೂಡ ಸ್ಪಂದಿಸುವ ಕೆಲಸ ಮಾಡಿಲ್ಲ. ಸಮಸ್ಯೆ ಹೇಳಿಕೊಂಡರೆ, ಇಲ್ಲಸಲ್ಲದ ಮಾತಾಡಿ ಅವಮಾನಿಸುತಿದ್ದಾರೆ. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು  ಜನರು ದೂರಿದರು. ಗ್ರಾಮಗಳಿಗೆ ಭೇಟಿನೀಡಿ ಗ್ರಾಮೀಣ ಜನರ ಸಮಸ್ಯೆಗೆ ಸ್ಪಂಧಿಸದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಮಾತಿನ ಚಮಕಿ ಕೂಡ ನಡೆಯಿತು

ಈ ಸಂದರ್ಭದಲ್ಲಿ ಕೃಷ್ಣ ಪಾಟೀಲ, ಚಂದ್ರಶೇಖರ ಕೊಡಂಬಲ, ಶರಣು ಪಾಲಾಡಿ, ಬಸವರಾಜ ಅತಿವಾಳ, ಅರ್ಜುನ ಕತ್ರಿ, ದಶರಥ ಮಾಡಗಿ, ದೇವೇಂದ್ರ ಕಟ್ಟಿಮನಿ, ಶಿವಶಂಕರ ಇಟಗಿ, ಅರ್ಜುನ ಇದಲಾಯಿ ಸೇರಿದಂತೆ ಅನೇಕ ಜನರು ಇದ್ದರು.

https://youtu.be/lz7W5gcl9dw?si=0Pxo3vh6C6ujJqFt

Source Evidence