ತಳಕಲ್ ನಲ್ಲಿ ನೂತನ ಉಪ ಅಂಚೆ ಕಚೇರಿ ಉದ್ಘಾಟಿಸಿದ ಸಂಸದ ರಾಜಶೇಖರ ಹಿಟ್ನಾಳ್

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ತಳಕಲ್ ನಲ್ಲಿ ನೂತನ ಉಪ ಅಂಚೆ ಕಚೇರಿ ಉದ್ಘಾಟಿಸಿದ ಸಂಸದ ರಾಜಶೇಖರ ಹಿಟ್ನಾಳ್

ಕುಕನೂರ :  ಉಪ ಅಂಚೆ ಕಚೇರಿ ಆರಂಭದಿಂದ 

ಮನೆ ಬಾಗಿಲಿಗೆ ಹಲವು ಸೇವೆಗಳು ಲಭ್ಯವಿದ್ದು , ತಳಕಲ್ ಗ್ರಾಮ ಹಾಗೂ ಸುತ್ತ ಮುತ್ತಲಿನ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು.

 ತಳಕಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಉಪ ಅಂಚೆ ಕಚೇರಿಯನ್ನು    ಉದ್ಘಾಟಿಸಿ ಮಾತನಾಡಿದ ಅವರು.

ನೂತನ ಕಚೇರಿಯ ಫಲಕ ಅನಾವರಣಗೊಳಿಸಿ, ದೀಪ ಬೆಳಗಿಸಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಅಂಚೆ ಇಲಾಖೆ ಇಂದಿಗೂ ಗ್ರಾಮೀಣ ಭಾರತದ ಜೀವನಾಡಿಯಾಗಿದೆ. ಕೇಂದ್ರ ಸರ್ಕಾರ ಅಂಚೆ ಕಚೇರಿಗಳ ಮೂಲಕ ಜನಸಾಮಾನ್ಯರಿಗೆ ಬ್ಯಾಂಕಿಂಗ್, ವಿಮಾ, ಸುಕನ್ಯಾ ಸಮೃದ್ಧಿ, ಅಟಲ್ ಪೆನ್ಷನ್, ಆಧಾರ್ ಮತ್ತು ಹಣ ವರ್ಗಾವಣೆ ಸೇರಿದಂತೆ ಹಲವು ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದೆ ಎಂದು ಹೇಳಿದರು.

ತಳಕಲ್ ಸುತ್ತಮುತ್ತಲಿನ ಗ್ರಾಮಗಳ ಜನರು ಸಣ್ಣಪುಟ್ಟ ಅಂಚೆ ಕೆಲಸಗಳಿಗೂ ಕುಕನೂರ ಅಥವಾ ಕೊಪ್ಪಳಕ್ಕೆ ಹೋಗಬೇಕಿತ್ತು. ಈ ನೂತನ ಉಪ ಅಂಚೆ ಕಚೇರಿಯಿಂದ ಇನ್ನು ಮುಂದೆ ಸ್ಥಳೀಯರಿಗೆ ತ್ವರಿತ ಸೇವೆ ದೊರೆಯಲಿದೆ. ಗ್ರಾಮದ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ನಾನು ಬದ್ಧನಿದ್ದೇನೆ ಎಂದು  ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳಾದ ರಾಜಶೇಖರ್ ಪಾಟೀಲ, ಮುಖಂಡರಾದ  ಯಂಕಣ್ಣ ಯರಾಶಿ, ಹಣಮಂತ ಗೌಡ ಚಂಡೂರು, ಶಿವಣ್ಣ ಆದಾಪುರ, ತಿಮ್ಮಣ್ಣ ಚೌಡಿ , ಉದಯ ರಾಯರೆಡ್ಡಿ, ಪಿಡಿಓ ವೀರನಗೌಡ ಸೇರಿದಂತೆ,ಸದಸ್ಯರು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.